ಶವ ಸಂಸ್ಕಾರಕ್ಕೂ ಬಿಡದ ತುಂಗಭದ್ರಾ ಪ್ರವಾಹ..! | Bellary | Public TV

#publictv #bellary

ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಿ, ಪ್ರವಾಹ ಪರಿಸ್ಥಿತಿ ನಿರ್ಮಾಣ ಮಾಡಿದ್ದ. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಹೇಳಿಕೊಳ್ಳುವ ಮಳೆಯಾಗಿಲ್ಲ.. ಆದ್ರೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟ ಹಿನ್ನೆಲೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಕಂಪ್ಲಿಯಲ್ಲಿ ಮಾರಮ್ಮನಗುಡಿ ಓಣಿಯ ನಿವಾಸಿ ದಮ್ಮೂರು ಫಕ್ಕೀರಮ್ಮ ಅನಾರೋಗ್ಯದಿಂದ ಮೃತರಾಗಿದ್ರು. ತುಂಗಭದ್ರಾ ನದಿ ದಂಡೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಬೇಕಿತ್ತು. ಆದರೆ, ಸ್ಮಶಾನಕ್ಕೆ ತೆರಳುವ ರಸ್ತೆಗೆ ನದಿ ಹಿನ್ನೀರು ನುಗ್ಗಿದ್ದರಿಂದ ತೆಪ್ಪದಲ್ಲಿ ಮೃತದೇಹವನ್ನು ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಪ್ರತಿವರ್ಷ ನೆರೆ ಬಂದಾಗ ಇದೇ ಸಮಸ್ಯೆ ಇದ್ದು. ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಸೂಕ್ತ ಪರಿಹಾರ ಕೊಟ್ಟಿಲ್ಲ.

Watch Live Streaming On http://www.publictv.in/live